

14th March 2026
ಬೈಲಹೊಂಗಲ- ಕರ್ನಾಟಕ ಸರ್ಕಾರದ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ದಿನಾಂಕ 13ರಂದು ಬೆಳಗಾವಿ ಜಿಲ್ಲಾ ಮಟ್ಟದ ಪದವಿ ಮತ್ತು ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಂತಿಮ ಹಂತದ " ಕಟ್ಟೀಮನಿ ಕಥಿ ಹೇಳೂಣ ಸ್ಪರ್ಧೆ " ಯಲ್ಲಿ ಬೈಲಹೊಂಗಲ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ನಾಲ್ಕನೆಯ ಸೆಮಿಸ್ಟರ ವಿದ್ಯಾರ್ಥಿನಿ ತಿರುಳ್ಗನ್ನಡ ನಾಡಿನ ವಕ್ಕುಂದ ಗ್ರಾಮದ ಕುಮಾರಿ ಸ್ಪೂರ್ತಿ ಶ್ರೀಶೈಲ ಕೋಟಗಿ ಪ್ರಥಮ ಸ್ಥಾನ ಪಡೆದಿದ್ದಾಳೆಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಯಲ್ಲಪ್ಪ ಹಿಮ್ಮಡಿ, ಸದಸ್ಯ ಕಾರ್ಯದರ್ಶಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ವಿದ್ಯಾವತಿ ಭಜಂತ್ರಿ ತಿಳಿಸಿದ್ದಾರೆ.
ಬೆಳಗಾವಿಯ ಸುಭಾಸ ನಗರದ ಕುಮಾರ ಗಂಧರ್ವ ಕಲಾಮಂದಿರದ ಆವರಣದಲ್ಲಿರುವ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಕುಮಾರಿ ಸ್ಪೂರ್ತಿ ಶ್ರೀಶೈಲ ಕೋಟಗಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್.ಚೆನ್ನೂರ, ಖ್ಯಾತ ಸಾಹಿತಿ ಡಾ.ರಾಮಕೃಷ್ಣ ಮರಾಠೆ,ಬಸವರಾಜ ಕಟ್ಟೀಮನಿಯವರ ಮೊಮ್ಮಗಳಾದ ಡಾ.ವೀಣಾ ಬಿರಾದಾರ,ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಡಾ.ಸುಬ್ಬರಾವ ಎಂಟೆತ್ತಿನವರ,ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಯಲ್ಲಪ್ಪ ಹಿಮ್ಮಡಿ,ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ವಿದ್ಯಾವತಿ ಭಜಂತ್ರಿ,ಸದಸ್ಯ ಸಂಚಾಲಕರಾದ ಡಾ. ಕೆ.ಆರ್.ಸಿದ್ದಗಂಗಮ್ಮ ,ಸದಸ್ಯರಾದ ಶ್ರೀಮತಿ ಮಂಜುಳಾ ಬಿರಾದಾರ,ಡಾ. ಜೆ.ಪಿ.ದೊಡ್ಡಮನಿ, ಡಾ.ವಿಷ್ಣು ಶಿಂಧೆ,ಪ್ರೊ.ಎಸ್.ಜಿ.ಚಿಕ್ಕ ನರಗುಂದ, ಶ್ರೀಮತಿ ಹಮೀದಾಬೇಗಂ ದೇಸಾಯಿ, ವಿಠ್ಠಲ ದಳವಾಯಿ ಸ್ಮರಣಿಕೆ,ಪ್ರಮಾಣ ಪತ್ರ ಮತ್ತು ಐದು ಸಾವಿರ ರೂಪಾಯಿ ನಗದು ನೀಡಿ ಗೌರವಿಸಿದರು.
ತಿರುಳ್ಗನ್ನಡ ನಾಡಿಗೆ ಕೀರ್ತಿ ತಂದ ಸ್ಪೂರ್ತಿ ಶ್ರೀಶೈಲ ಕೋಟಗಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್.ಚೆನ್ನೂರ, ಬಸವರಾಜ ಕಟ್ಟೀಮನಿಯವರ ಮೊಮ್ಮಗಳಾದ ಶಿಕ್ಷಣ ತಜ್ಞೆ, ಸಾಮಾಜಿಕ ಕಾರ್ಯಕರ್ತೆ ವೀಣಾ ಬಿರಾದಾರ, ವಿದ್ಯಾರ್ಥಿನಿಗೆ ಮಾರ್ಗ ದರ್ಶನ ನೀಡಿದ ಬೈಲಹೊಂಗಲ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಘವೇಂದ್ರ ಹುಲಕುಂದ, ಕನ್ನಡ ಪ್ರಾಧ್ಯಾಪಕರಾದ ಡಾ.ರವೀಂದ್ರ ಚಿಕ್ಕಮಠ ಗೌರವಿಸಿ,ಅಭಿನಂದಿಸಿ, ಶುಭ ಹಾರೈಸಿದರು.

ಗಂಗಾವತಿ ಫ್ಯಾನ್ಸಿ ಸ್ಟೋರ್ ನಲ್ಲಿ ನಶೆ ಬರುವ ಟ್ಯಾಬ್ಲೆಟ್ ಮಾರಾಟ: ಪ್ರಕರಣ ದಾಖಲು- ಯುವಕರಿಗೂ ಲಿಂಕ್: ವ್ಯಕ್ತಿಯೋರ್ವನ ಹೇಳಿಕೆ

ಗಂಗಾವತಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್- ನಾಲ್ಕು ನ್ಯಾಯಾಲಯಗಳಲ್ಲಿ 617 ಪ್ರಕರಣ ಇತ್ಯರ್ಥ: ರೂ. 8.48 ಕೋಟಿ ಸರಕಾರಕ್ಕೆ ಜಮೆ- ಮನಸ್ಥಾಪ ಬಿಟ್ಟು ಒಂದಾದ ಮೂವ್ವರು ದಂಪತಿಗಳು

ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಲೋಕ ಅದಾಲತ್- ರೂ.44.44 ಕೋಟಿ ಮೌಲ್ಯದ 49953 ಪ್ರಕರಣಗಳು ಇತ್ಯರ್ಥ- ಮನಸ್ಥಾಪ ಬಿಟ್ಟು ಒಂದಾದ ಏಳು ದಂಪತಿಗಳು

ಹಿರಿಯ ವಕೀಲ ಪ್ರಭಾಕರ ಹೊಸಕೇರಿ ಮೇಲೆ ಮುಸ್ಲಿಂ ಯುವನಿಂದ ಹಲ್ಲೆ÷ಮುಖಂಡರು ಠಾಣೆಗೆ ದೌಡು: ಹಲ್ಲೆಕೊರನನ್ನು ಬಂಧಿಸುವಂತೆ ಅಗ್ರಹ